ಚಾಳಮೀನು-
	ಕ್ಲೂಪಿಫಾರ್ಮಿಸ್ ಗನದ ಕ್ಲೂಪೀಯಿಡೆ  ಕುಟುಂಬಕ್ಕೆ ಸೇರಿದ ಸಾರ್ಡೀನ್ ಜಾತಿಯ ಒಂದು ಮೀನು. ಸಾರ್ಡಿನೆಲ ಫಿಂಬ್ರಿಯೇಟ ಅಥವಾ ಕ್ಲೂಪಿಯ ಫಿಂಬ್ರಿಯೇಟ ಇದರ ಶಾಸ್ತ್ರೀಯ ಹೆಸರು. ಪೇಡಿ, ಎರೆಬೈ ಪರ್ಯಾಯ ನಾಮಗಳು. ಇದು ಪ್ರಪಂಚದ ಉಷ್ಣವಲಯದ ಸಮುದ್ರಗಳಲ್ಲಿ ವಾಸಿಸುತ್ತದೆ. ಮೀನುಗಾರಿಕೆಯಲ್ಲಿ ಅತ್ಯಂತ ಮುಖ್ಯವಾದ ಮೀನುಗಳಲ್ಲೊಂದು. ಭಾರತದಲ್ಲಿ ಪೂರ್ವ ಕರಾವಳಿಯ ಉತ್ತರ ಭಾಗದಲ್ಲೂ ಪಶ್ಚಿಮ  ಕರಾವಳಿಯ ದಕ್ಷಿಣ ಭಾಗದಲ್ಲೂ ಹೇರಳವಾಗಿ ಸಿಕ್ಕುತ್ತದೆ. ಸಪ್ಟೆಂಬರ್‍ನಿಂದ ಜನವರಿವರೆಗಿನ ಅವಧಿಯಲ್ಲಿ ಇದರ ಹಿಡಿವಳಿ ಅತ್ಯಂತ ಹೆಚ್ಚು. ಈ ಮೀನುಗಳನ್ನು ಕರ್ನಾಟಕದ ಕರಾವಳಿಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹಿಡಿಯಲಾಗುತ್ತದೆ. ಈ ಮೀನನ್ನು ಆಹಾರವಾಗಿ ಬಳಸುವುದಲ್ಲದೇ, ಇದರಿಂದ  ಎಣ್ಣೆಯನ್ನೂ ತೆಗೆಯುವುದುಂಟು. ಇದನ್ನು ಗೊಬ್ಬರವಾಗಿ ಬಳಸುವುದೂ ಇದೆ. 
(ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ